ಈ ಬ್ಲಾಗ್ ಅನ್ನು ಹುಡುಕಿ

ಮಂಗಳವಾರ, ನವೆಂಬರ್ 13, 2018

ಕುಂಬಾರನ ಮನೆಯಂಗಳದ ಹಣತೆ


   
ಕುಂಬಾರನ ಮನೆಯಂಗಳದ ಹಣತೆ
  
ಕುಂಬಾರನ ಹಣತೆಯಲ್ಲಿ
ಭಕ್ತಿಯ ತೈಲವನು ಸುರಿದು
ಶುದ್ಧವೆಂಬ ಹತ್ತಿಯ ಭತ್ತಿಯನಿಟ್ಟು
ಅಗ್ನಿದೇವನ ಆಹ್ವಾನಿಸಿ
ಅಜ್ಞಾನ,ಕಾಮ,ಕ್ರೋದ,ಮದ–ಮತ್ಸರ,ಮೋಹ–ಲೋಭಗಳನ್ನು
ಸುಟ್ಟು ಸುಜ್ಞಾನವೆಂಬ ಬೆಳಕನ್ನು ಹರಿಸೋಣ
ಕುಂಬಾರನ ಹಣತೆಯಲ್ಲಿ
ಅ ಸಂಘ ಈ ಸಂಘ
ಅ ತೆಲುಗು ಈ ತಮಿಳು
ಅ ಕುಲ ಈ ಕುಲಾಲ
ಅ ಮೋಹ ಈ ಮೂಲ್ಯ
ಅ ಲಿಂಗ ಈ ಲಿಂಗಾಯಿತ
ಅ ಚಕ್ರ ಈ ಚಕ್ರಸಾಲಿ
ಅ ಭಕ್ತ ಈ ಗುಂಡಾಭಕ್ತ
ಅ ಕುಂಬಾರ ಶೇಟ್ಟಿ ಈ ಕನ್ನಡ ಕುಂಬಾರ
ಎಂಬ ಎಲ್ಲಾ ಭತ್ತಿಯ ಒಸೆದು‌‌
ಅಖಂಡವೆಂಬ ಒಂದೇ ಭತ್ತಿಯ ಮಾಡಿ
ಎಲ್ಲರ ಮನೆಯ ಏಕತೆಯ ಎಣ್ಣೆಯನ್ನು ಸುರಿದು
ಅ ವಿಧ ಈ ವಿಧಗಳು
ಅ ಅಚಾರ ಈ ವಿಚಾರಗಳನ್ನು ಸುಟ್ಟು
ಕುಂಬಾರನ ಮನೆಯಂಗಳದಲ್ಲಿ
ಬೆಳಕನು ಚಲ್ಲೋಣ
ದೀಪಾವಳಿಯ ಸಂತಸದಲಿ.....

    ಕುಬೇರ ಕುಂಬಾರ



ಕಾಮೆಂಟ್‌ಗಳಿಲ್ಲ: