.......ಕುಂಬಾರನ ಯುಗಾದಿ........
ಭೂವಿಗೆದೆಯೊಡ್ಡಿ
ಆವುಗೆಯ ಬೆಂಕಿಯನುಂಡು
ಮಡಕೆಯ ಕೊರಳಿಗೆ
ಹಳೆಯ ಬೇರಿನ ಮೇಲೆ ಚಿಗುರಿದ
ಹೊಸ ಬೇವು–ಮಾವು ಎಲೆಯ ಕಟ್ಟಿ
ನಮ್ಮೊಳಗೆ ಅಡಗಿರುವ ಮೌನ ಕ್ರಾಂತಿಯ ಎಚ್ಚರಿಸಿ
ಉಗ್ರಕ್ರಾಂತಿಗೆ ಮುನ್ನುಡಿ ಬರೆಯೋಣ
ನಮ್ಮ ಬದುಕಿನ ಭಾಗವಾದ ಚಕ್ರ
ಖುತುಚಕ್ರದಂತೆ ಓಡಬೇಕು ಅದಕ್ಕೆ
ಅಹಂಗಳನ್ನು, ಪ್ರತಿಷ್ಟೆಗಳನ್ನು ಬಿಟ್ಟು
ನಾವು ನಾವಾಗಬೇಕು
ಹಳೆಬೇರು ಹೊಸತಿಗೆ ಮೂಲಸೆಲೆಯಾಗಿ
ಹೇವಿಳಂಬಿಯಲ್ಲಿ
ಹೊಸ ಹೋರಾಟಕ್ಕೆ ಅಣಿಯಾಗುತ್ತಾ
ಹೊಸ ವರ್ಷದ ಹೊಸ ನಸುಕಿನ ಬೆಳಕಲ್ಲಿ
ನಮ್ಮ ಬದುಕಿಗೆ
ಹೊಸ ಯುಗಾದಿಯನ್ನು ಬರಮಾಡಿಕೊಳ್ಳೋಣ...
ಕುಬೇರ ಕುಂಬಾರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ