ಬುದ್ಧ ಅಂಡ್ ಹಿಸ್ ಧಮ್ಮ ಮತ್ತು ಪ್ರಜಾಪತಿ(ಕುಂಬಾರ)
ಬುದ್ಧ ಅಂಡ್ ಹಿಸ್ ಧಮ್ಮ ಎಂಬುವುದು ಡಾ. ಬಿ.ಆರ್ ಅಂಬೇಡ್ಕರ್ ಅವರ ಮಹತ್ತ್ವದ ಕೃತಿಯಲ್ಲಿ ಒಂದು. ಅಲ್ಲದೇ ಈ ಕೃತಿಯು ಅವರ ಮಹತ್ತ್ವಾಕಾಂಕ್ಷೆಯ ಮೇರುಕೃತಿ. ಭಾರತೀಯ ಭಾಷೆಗಳಲ್ಲೂ, ಪಾಶ್ಚಾತ್ಯಭಾಷೆಗಳಲ್ಲೂ ಗೌತಮಬುದ್ಧನ ಮೇಲೆ ಬಂದಿರುವ ಎಲ್ಲಾ ಕೃತಿಗಳ ಪರಾಮರ್ಶನ ಮಾಡಿ ಮತ್ತು ಪಾಲಿ–ಸಂಸ್ಕೃತ ಗ್ರಂಥಗಳ ಸಮಗ್ರ ಅಧ್ಯಯನ ನಡೆಸಿ ಅವರು ನಿರ್ಮಾಣಗೊಳ್ಳುವ ಒಂದು ವರ್ಷದ ಹಿಂದೆಯೇ ಇದನ್ನು ಪ್ರಕಟಣೆಗೆ ಸಿದ್ಧಪಡಿಸಿದ್ದರು. ಅವರ ಕಾಲದಲ್ಲಿ ಈ ಕೃತಿಯು ಪ್ರಕಟಗೊಳ್ಳಲಿಲ್ಲ, 1957ರಲ್ಲಿ ಇದು ಪ್ರಕಟಗೊಂಡಿತು. ಇದು ಪ್ರಕಟಗೊಂಡು ಅರುವತ್ತು ವರ್ಷದ ನಂತರ ಕಲಬುರಗಿಯ ಪಾಲಿ ಇನ್ ಸ್ಟಿಟ್ಯೂಟ್ ಸಂಸ್ಥೆಯು ಇದನ್ನು ಇತ್ತೀಚೆಗೆ ಕನ್ನಡ ಭಾಷೆಯಲ್ಲಿ ಹೊರತಂದಿದೆ. ಪಾಲಿ ಸಂಸ್ಥೆಯು ಉನ್ನತ ಶಿಕ್ಷಣ ಅಡಿಯಲ್ಲಿ ರಚಿತವಾದ ಸ್ವಾಯತ್ತ ಸಂಸ್ಥೆ. ಈ ಕೃತಿಯನ್ನು ಅನುವಾದಕರೂ, ಸ್ವತಂತ್ರ ಬರೆಹಗಾರರೂ, ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಡಾ. ಎನ್. ಜಗದೀಶ ಕೊಪ್ಪ ಅವರು ಅನುವಾದಿಸಿ ಈ ಸಂಸ್ಥೆಯ ಮೂಲಕ ಪ್ರಕಟಿಸಿದ್ದಾರೆ.
ಕಪಿಲವಸ್ತು ಎಂಬ ನಗರ ಶಾಕ್ಯ ರಾಜ್ಯದ ರಾಜಧಾನಿಯಾಗಿತ್ತು. ಶಾಕ್ಯರ ರಾಜ್ಯವು ಈಶಾನ್ಯ ಭಾರತದ ಒಂದು ಸ್ವತಂತ್ರ ರಾಜ್ಯವಾಗಿತ್ತು. ಸಿನಹು ಎಂಬ ರಾಜನಿದ್ದನು, ಅವನ ಮಗನಾದ ಶುದ್ಧೋಧನ ಮುಂದೆ ಅ ಸಾಮ್ರಾಜ್ಯದ ರಾಜನಾದನು. ಶುದ್ಧೋಧನನು ಮಹಾಪರಾಕ್ರಮಿಯಾಗಿದ್ದನು ಹಾಗೂ ಬಹುದೊಡ್ಡ ಸೈನ್ಯದ ಒಡೆಯನಾಗಿದ್ದನು. ಶುದ್ಧೋಧನನು ದೇವದಾಹ ಎಂಬ ಹಳ್ಳಿಯ ವಾಸಿಯಾದ ಕೋಲಿಯ ವಂಶದ ಅಂಜನ ಮತ್ತು ಸುಲಕ್ಷಣಾ ಎಂಬ ದಂಪತಿಯ ಪುತ್ರಿಯರನ್ನು ಮದುವೆಯಾದನು. ಮೊದಲಿಗೆ, ಮೊದಲನೇ ಪುತ್ರಿಯಾದ ಮಹಾಮಾಯೆ ಎಂಬುವವಳನ್ನು ಮದುವೆಯಾಗಿ, ನಂತರ ತನ್ನ ಪತ್ನಿ ಮಹಾಮಾಯೆಯ ಹಿರಿಯ ಸಹೋದರಿಯಾದ ಮಹಾಪ್ರಜಾಪತಿ ಎಂಬಾಕೆಯನ್ನು ವಿವಾಹವಾದನು.
ಶುದ್ಧೋಧನ ಮತ್ತು ಮಹಾಮಾಯೆಗೆ ಕ್ರಿಸ್ತಪೂರ್ವ 563ನೇ ವರ್ಷದ ವೈಶಾಖ ಪೂರ್ಣಿಮೆಯ ದಿನದಂದು ಮಹಾಮಾಯೆಗೆ ಗಂಡುಮಗುವಿನ ಜನನವಾಯಿತು. ಅ ಗಂಡು ಮಗುವಿಗೆ ಸಿದ್ಧಾರ್ಥ ಗೌತಮ ಎಂದು ಹೆಸರಿಡಲಾಯಿತು. ಮಹಾಮಾಯೆಯು ಅನಿರೀಕ್ಷಿತವಾಗಿ ಅನಾರೋಗ್ಯಕ್ಕೆ ತುತ್ತಾದಳು. ಅಕೆಯ ಕಾಯಿಲೆಯು ಗಂಭೀರ ಸ್ಥಿತಿಯನ್ನು ಮುಟ್ಟಿತು. ತನ್ನ ಬದುಕಿನ ಅಂತ್ಯಕಾಲ ಸಮೀಪಿಸುತ್ತಿದೆ ಎಂಬುವುದನ್ನು ಅರಿತ ಮಹಾಮಾಯೆಯು ತನ್ನ ಸಹೋದರಿ ಪ್ರಜಾಪತಿ ಗೋತಮಿಯನ್ನು ಕರೆದು, ‘ಸಹೋದರಿ ಪ್ರಜಾಪತಿ, ನನ್ನ ಮಗುವನ್ನು ನಿನ್ನ ವಶಕ್ಕೆ ಒಪ್ಪಿಸುತ್ತಿದ್ದೇನೆ, ನೀನು ಅವನನ್ನು ಹೆತ್ತತಾಯಿಗಿಂತಲೂ ಹೆಚ್ಚು ಪ್ರೀತಿಸುತ್ತೀಯ ಎಂಬುದರ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ’ ಎಂದು ನುಡಿದು ಕೊನೆಯುಸಿರೆಳೆದಳು. ಹೀಗೆ ಸಿದ್ಧಾರ್ಥ ಗೌತಮನು ಮಹಾಪ್ರಜಾಪತಿಯ ಆರೈಕೆಯಲ್ಲಿ ಬೆಳೆದು ದೊಡ್ಡವನಾದನು. ಮಹಾಪ್ರಜಾಪತಿ ಆರೈಕೆಯಲ್ಲಿ ಮತ್ತು ಮಗನಾಗಿ ಬೆಳೆದ ವ್ಯಕ್ತಿಯೇ ‘‘ಗೌತಮ ಬುದ್ಧ’’. ಇವನು ಮುಂದೆ ಬೌದ್ಧ ಧರ್ಮವನ್ನು ಸ್ಥಾಪಿಸಿದನು.
ಇಲ್ಲಿ ಈ ಕೃತಿಯ ಪ್ರಸ್ತಾಪ ಏಕೆ ಎಂಬುವುದನ್ನು ನೋಡೋಣ. ಗೌತಮ ಬುದ್ಧನ ತಾಯಿ ಪ್ರಜಾಪತಿ ಎಂದಾಯಿತಲ್ಲವೆ?. ಬುದ್ಧನನ್ನು ಸಾಕಿ ಬೆಳೆಸಿದವಳೂ ಸಹ ಪ್ರಜಾಪತಿ ಎಂದಾಯಿತಲ್ಲವೆ?. ಬುದ್ಧನ ತಾಯಿ ಪ್ರಜಾಪತಿ ಕುಲದವಳೆ?, ಅಥವಾ ಅವಳ ಹೆಸರು ಮಾತ್ರ ಪ್ರಜಾಪತಿಯೇ. ಅವಳ ಕುಲ ಕೋಲಿಯ ವಂಶವು ಪ್ರಜಾಪತಿಗೆ ಸೇರಿದ್ದೇ? ಅವಳ ಕುಲ ಕೋಲಿಯ ವಂಶವು ಪ್ರಜಾಪತಿಗೆ ಸೇರಿದ್ದು ಎಂದಾದರೆ, ಅವಳು ಪ್ರಜಾಪತಿಗೆ ಸೇರುತ್ತಾಳೆ ಮತ್ತು ಬುದ್ಧನು ಸಹ ಪ್ರಜಾಪತಿಗೆ ಸೇರುತ್ತಾನೆ ಎಂದಾಯಿತಲ್ಲವೆ?( ಬುದ್ಧನನ್ನು ಒಂದು ಕುಲಕ್ಕೆ ಸೇರಿಸುವುದ ಸಂಜಸವಲ್ಲದಿದ್ದರು, ಅವನ ಪೂರ್ವ ಇತಿಹಾಸವನ್ನು ತಿಳಿಯುವುದು ತಪ್ಪಲ್ಲ, ಮತ್ತು ಈ ಪೂರ್ವ ಇತಿಹಾಸಕ್ಕೆ ಮಾತ್ರ ಸಿಮೀತವಾಗಿ ಇಲ್ಲಿ ನೋಡುವುದು ಉತ್ತಮ, ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಯಾದರೆ ನಮ್ಮೇಲ್ಲರಿಗೂ ಹೆಮ್ಮೆ). ಇದೇ ವಿಷಯವನ್ನು ಒಮ್ಮೆ, ನಮ್ಮ ಇತಿಹಾಸ ಸಂಶೋಧಕರಾದ ಮಂಜಪ್ಪ ಬುರಡೆಕಟ್ಟೆಯವರು ಹೇಳಿದ್ದರು. ಎಲ್ಲಿಯಾದರೂ ಅ ಬಗ್ಗೆ ಪ್ರಸ್ತಾಪಿಸಿದ ಪುಸ್ತಕ ಸಿಕ್ಕರೆ ನೋಡು ಎಂದು ತಿಳಿಸಿದ್ದರು. ಪ್ರಜಾಪತಿಯ ವಿಷಯವು ಡಾ. ಬಿ.ಆರ್ ಅಂಬೇಡ್ಕರ್ ಅವರ ಪುಸ್ತಕವಾದ ಬುದ್ಧ ಅಂಡ್ ಹಿಸ್ ಧಮ್ಮ ಎಂಬುವುದುರಲ್ಲಿ ವಿವರವಾಗಿ ಮೂಡಿಬಂದಿದೆ. ನೋಡಿ ನಮಗೆ ಎಂತಹ ಇತಿಹಾಸವಿದೆ ಎನ್ನುವುದನ್ನು. ಉತ್ತರ ಭಾರತದಲ್ಲಿ ಕುಂಬಾರರಿಗೆ ಪ್ರಜಾಪತಿ ಎಂದು ಕರೆಯುತ್ತಾರೆ. ನೀವು ಸಹ ಈ ಪುಸ್ತಕವನ್ನು ಒಮ್ಮೆ ಓದಿ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳನ್ನು ನಮ್ಮ ಇತಿಹಾಸಕಾರರು ಮಾಡಬೇಕು. ನೀವು ಪುಸ್ತಕ ಸಿಕ್ಕರೆ ಒಮ್ಮೆ ಓದಿ.
ಆಧಾರ ಮತ್ತು ಕೃಪೆ: ಡಾ. ಎನ್.ಜಗದೀಶ ಕೊಪ್ಪ ಅವರ ಬುದ್ಧ ಮತ್ತು ಆತನ ಧಮ್ಮ ಎಂಬ ಪುಸ್ತಕದಿಂದ...

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ