ಈ ಬ್ಲಾಗ್ ಅನ್ನು ಹುಡುಕಿ

ಗುರುವಾರ, ನವೆಂಬರ್ 15, 2018

ಮಡದಿಗೆ ಬಣ್ಣ ಬಣ್ಣದ ಸೀರೆ



       


                                                             ಮಡದಿಗೆ ಬಣ್ಣ ಬಣ್ಣದ ಸೀರೆ

ಭೂವಿಯ ಒಡಲಿನಿಂದ
ಹೆಕ್ಕಿತೆಗೆದ
ಮಣ್ಣ ಮುದ್ದೆಗೆ
ತಿಗರಿ ತಿರುಗಿಸಿ
ಆಕೃತಿಗೆ ಜೀವದ
ರೂಪ ಕೊಟ್ಟು
ಅರಿಷಡ್ವರ್ಗಗಳೆಂಬ
ಆವಿಗೆಯಲ್ಲಿ ಸುಟ್ಟು
ಕನಸಿನ ಬಣ್ಣ ಬಳೆದು
ಜೀವಂತಿಕೆಯ ಮೂಡಿಸಿ
ಸಂತೆಯಲ್ಲಿ ಮಾರಿ
ನನ್ನ ಛಾಯಗೆ
ಬಣ್ಣಬಣ್ಣದ ಸೀರೆಯ ಕೊಂಡು
ಜೋಡೆತ್ತಿನ ಬಂಡಿ ಹೊಡೆದುಕೊಂಡು
ಊರ ದಾರಿಹಿಡಿದೆ.....


ಕುಬೇರ ಕುಂಬಾರ
12/11/2018

ಕಾಮೆಂಟ್‌ಗಳಿಲ್ಲ: