.....ನನ್ನ ದೀಪವಾಳಿ.....
ಮುರಿದು ಬಿದ್ದ ಚಪ್ಪರದ
ಕೆಳಗಿನ ಆವಿಗೆಯ ಗೂಡು
ಜರಿಯ ಮಳೆಗೂ ನೆನೆದು
ನನ್ನಂತೆಯೇ ಕೃಷವಾದ
ದೇಹವನ್ನು ಹೊದ್ದು ನಿಂತಿದೆ...
ಈ ಮೂಳೆಯನ್ನೊತ್ತಾ ದೇಹದಿಂದ
ಜೀವತೇಯ್ದು ಮಾಡಿದ ಮಡಿಕೆ ದೀಪಗಳನ್ನಿಟ್ಟು
ಬೆಂಕಿ ಹಚ್ಚಿದ ನೆನಪು
ನನ್ನ ಸ್ಮೃತಿ ಪಟಲದಲ್ಲಿ ಮಾಸಿಹೋಗಿದೆ....
ಅದು ಎಂದೊ
ತುಪ್ಪವ ಚುಮುಕಿಸಿ
ಹೋಳಿಗೆಯ ಜೊತೆಗೆ ಅಕ್ಕಿಯ ಅನ್ನವ ಉಂಡಾ
ದೀಪಾವಳಿ ಹಬ್ಬವನ್ನು ನೆನಪಿಸಿದ
ದೀಪಾವಳಿಗಳು ಸಾಲುಸಾಲಾಗಿ ಎಷ್ಟು ಬಂದು ಹೋದವೊ ಲೆಕ್ಕವಿಲ್ಲ...
ಈ ಮಣ್ಣಿನ ದೇಹ ಮಣ್ಣಿಗೆ ಸೇರುವ ಮುನ್ನಾ
ನನ್ನ ದೀಪಗಳು ಮನೆ ಮನಗಳನ್ನು ಬೆಳಗಬೇಕು
ಕತ್ತಲೆಯ ಸರಿಸಿ ದಿವ್ಯಬೆಳಕನ್ನು ಸೂಸಬೇಕು
ಮತ್ತೆ ನನ್ನ ದೀಪವಾಳಿ ಬಂದು
ಹೋಳಿಗೆಯ ಜೊತೆಗೆ ಅಕ್ಕಿಯ ಅನ್ನವ ಹೊತ್ತು ತರಬೇಕು...
ಕುಬೇರ ಕುಂಬಾರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ