
ಶುಭಾಶಯಗಳು
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಬುರುಡೆಕಟ್ಟೆ ಗ್ರಾಮದ ಗಿರಿಜಮ್ಮ, ಮಲ್ಲೇಶ ಕುಂಬಾರ ದಂಪತಿಯರಲ್ಲಿ ಜನಿಸಿ , ಬುರುಡೆಕಟ್ಟೆ, ಆನಿವಾಳ, ಮಲ್ಲಪ್ಪನಹಳ್ಳಿಗಳಲ್ಲಿ ಪ್ರಾಥಮಿಕ, ಪ್ರೌಢ, ಪದವಿ–ಪೂರ್ವ ಶಿಕ್ಷಣ ಹಾಗೂ ಚಿತ್ರದುರ್ಗದಲ್ಲಿ ಶಿಕ್ಷಕರ ತರಬೇತಿ ಪಡೆದು ಶಿಕ್ಷಕ ವೃತ್ತಿಗೆ ನೇಮಕಗೊಂಡರು. ಪ್ರಸ್ತುತ ದಾವಣಗೆರೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಾರ್ಯನಿರ್ವಿಸುತ್ತಿದ್ದಾರೆ. ಮೈಸೂರು ಮಾನಸಗಂಗೋತ್ರಿ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರಪದವಿ ಪಡೆದಿ್್ದಾರೆ. ನಾಟಕ, ಕವನ ರಚನೆ, ಸಾಹಿತ್ಯ ರಚನೆ ಮತ್ತು ಇತಿಹಾಸ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ವಿವಿಧ ಇತಿಹಾಸ ಸಮ್ಮೇಳನದಲ್ಲಿ ಸಂಶೋಧನ ಪ್ರಬಂಧಗಳನ್ನು ಮಂಡಿಸಿದ್ದಾರೆ. ಶ್ರೀ ಸಿದ್ಧಗಂಗಾ ಮಠವು ನಾಡಿನ ಪುಣ್ಯಪುರುಷರ, ದಾಸೋಹಿಗಳ ಕುರಿತು ಜ್ಞಾನದಾಸೋಹ ಮಣಿಮಾಲೆಯ ಎಂಬ ನೂರಾ ಎಂಟು ಪುಸ್ತಕಗಳನ್ನು ಪ್ರಕಟಿಸಿತ್ತು. ಇದರಲ್ಲಿ ಮಂಜಪ್ಪರವರ ಶಿವಶರಣೆಯರು ಎಂಬ ಒಂದು ಕೃತಿಯೂ ಸೇರಿದೆ. ಇತ್ತೀಚೆಗೆ ಸರ್ವಜ್ಞ ಅವರ ಕುರಿತ ಸಂಶೋಧನ ಪುಸ್ತಕ ಬಿಡುಗಡೆಗೆ ಸಿದ್ಧಗೊಂಡಿದೆ.
ಕುಂಬಾರ ಜನಾಂಗದ ಅಧ್ಯಯನ ಮಾಡುತ್ತಿರುವವರಲ್ಲಿ ಮಂಜಪ್ಪ ಬುರುಡೆಕಟ್ಟೆಯವರು ಮುಂಚುಣಿಯಲ್ಲಿ ಬಂದು ನಿಲ್ಲುತ್ತಾರೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಬಿಡುವಿನ ಮತ್ತು ರಜೆಯ ಸಮಯದಲ್ಲಿ ಕುಂಬಾರ ಜನಾಂಗಕ್ಕೆ ಸಂಬಂದಿಸಿದಂತೆ ಅನೇಕ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಪ್ರತಿ ದಿನವು, ಪ್ರತಿ ಕ್ಷಣವು ಕುಂಬಾರ ಜನಾಂಗಕ್ಕಾಗಿ ಇವರ ಹೃದಯ ತುಡಿಯುತ್ತಿರುತ್ತದೆ. ಇವರ ಈ ಉತ್ಸಾಹ ಎಂದೂ ಬತ್ತಿಲ್ಲ, ತುಂಬ ಹತ್ತಿರ ದಿಂದ ನಾನು ನೋಡಿದಂತೆ ಕುಂಬಾರ ಜನಾಂಗದ ಅಭಿವೃದ್ಧಿ ಕುರಿತು ಯಾವಾಗಲೂ ಯೋಚಿಸುತ್ತಿರುತ್ತಾರೆ. ಸಂಘ –ಸಂಸ್ಥೆಗಳಿಗೆ, ಯುವಕರಿಗೆ ಮಾರ್ಗದರ್ಶಕರಾಗಿ ನಿಂತು, ಸಲಹೆ ಸೂಚನೆಯನ್ನು ನಿಡುತ್ತಿರುತ್ತಾರೆ. ಕುಂಬಾರರ ವೈಭವಗಳನ್ನು, ಮಹತ್ವವನ್ನು, ಶ್ರೇಷ್ಟತೆಯನ್ನು, ವರ್ಚಸ್ಸುನ್ನು ಸದಾ ಮೆರೆಸುತ್ತಾ, ಕುಂಬಾರ ಜನಾಂಗದ ಹೆಸರಿಗೆ ಉಸಿರು ತುಂಬಲು ಮೌನವಾಗಿ ಸಂಶೋಧನೆ ಮಾಡುತ್ತ, ದುಡಿಯುತ್ತ ತಮ್ಮ ಜೀವನವನ್ನೇ ಈ ಕುಂಬಾರ ಜನಾಂಗಕ್ಕೆ ಮುಡಿಪಾಗಿಟ್ಟಿದ್ದಾರೆ. ಇಂದು ಅವರ ಹುಟ್ಟಿದ ದಿನ. ಮಂಜಪ್ಪ ಗುರುಗಳಿಗೆ ಕುಂಬಾರ ಜನಾಂಗದ ಪರವಾಗಿ ಮತ್ತು ನನ್ನ ವ್ಯಯಕ್ತಿವಾಗಿ, ಅವರಿಗೆ ತುಂಬು ಹೃದಯದಿಂದ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಲು ಹೆಮ್ಮೆ ಪಡುತ್ತೆನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ