.......ಹಮ್ಮಿಗೆ ಬ್ರಹ್ಮ ತಾ ಕೆಟ್ಟ ಪುಸ್ತಕದಲ್ಲಿನ ಕುಂಬಾರ ಕುರಿತು ತತ್ವಪದ.....
ಕೊಪ್ಪಳ ಜಿಲ್ಲಾ ಕೇಂದ್ರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲಾರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸಿ.ಬಿ ಚಿಲ್ಕರಾಗಿ ಅವರು ಗುರು ಶಿಷ್ಯರ ತತ್ವ ಪದಗಳನ್ನು ಸಂಪಾದಿಸಿ ಹಮ್ಮಿಗೆ ಬ್ರಹ್ಮ ತಾ ಕೆಟ್ಟ ಎಂಬ ಪುಸ್ತಕವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದಾರೆ. ಇವರು ತತ್ವ ಪದಗಳನ್ನು ಸಂಗ್ರಹಿಸುವಲ್ಲಿ ರಾಜ್ಯದಲ್ಲಿ ವಿಶೇಷ ಗೌರವವನ್ನು ಗಳಿಸಿಕೊಂಡಿದ್ದಾರೆ. ಹೀಗಾಗಲೇ ತತ್ವ ಪದಗಳ ಸಂಪಾದನೆಯ ಅನೇಕ ಪುಸ್ತಕಗಳನ ್ನು ಹೊರತಂದಿದ್ದಾರೆ. ಹಮ್ಮಿಗೆ ಬ್ರಹ್ಮ ತಾ ಕೆಟ್ಟ ಎಂಬ ಪುಸ್ತಕದಲ್ಲಿ ಶ್ರೀ ಹುಲ್ಲೂರು ಶಿವಣ್ಣ ಎಂಬುವವರು ಬರೆದ ಒಂದು ತತ್ವಪದ ಕುಂಬಾರರ ಕುರಿತದ್ದಾಗಿದೆ.
ನೋಡಿ...(ವಿ.ಸೂ. ಇದು ತತ್ವಪದ ಇದನ್ನು ನಕಲು ಮಾಡಿಕೊಂಡು ನಿಮ್ಮ ಹೆಸರನ್ನು ಸೇರಿಸಿಕೊಳ್ಳದಿರಿ)
ಚಿಲ್ಕರಾಗಿಯ ಕುಂಬಾರ ಬಸಣ್ಣ(1947) ಎಂಬುವವರು ಸಹ ಅನೇಕ ತತ್ವಪದಗಳನ್ನು ರಚಿಸಿದ್ದಾರೆ. ಅವರು ರಚಿಸಿದ ತತ್ವಪದಗಳನ್ನು ಸಂಗ್ರಹಿಸಿ ಪುಸ್ತಕರೂಪದಲ್ಲಿ ಹೊರತರಬೇಕಾದ ಕರ್ತವ್ಯ ನಮ್ಮ ಕುಂಬಾರರ ಮೇಲೆ ಇದೆ.
ಕುಂಬಾರೊ ನಾವು ಕುಂಬಾರೊ

ಶಂಭುನಗರಿಯಲ್ಲಿ ಕುಂಭ ತಿಗರಿಯನಿಟ್ಟು IIಪII
ಪಂಚತತ್ವದ ಘಟವ ವಂಚನಿಲ್ಲದೆ ಸೃಜಿಸಿ
ಪಂಚಬಾಣನ ಪಿತನ ಸಖನ ನೆನಹಿನೊಳು
ಪಂಚಪುರದೊಳಗಿದ್ದು ಕಿಂಚಿತ್ತು ಮರೆಯದೆ
ಪಂಚಮುಖನದಿವ್ಯ ಧ್ಯಾನದೋಳಿರುವಂಥ
ತಾಮಸಗುಣವಳಿದು ಕಾಮಿತಗಳ ಬಡಿದು
ನಾಮರೂಪಗಳನೆಲ್ಲವನತಿಗಳೆದು
ನೇಮದಿಂದಲಿನಮ್ಮ ಸ್ವಾಮಿಗುಂಡಯ್ಯನ
ಪ್ರೇಮದೋಳೊಗಿಬ್ರಹ್ಮ ಭಾವದಲಿರುವಂಥ
ಬ್ರಹ್ಮಗುಂಡನಂಶದ ಬ್ರಹ್ಮ ಸೂತ್ರವನಿಡಿದ
ಬ್ರಹ್ಮವೆಂಬಾಲುದಿ ಮೃಣ್ ಘಟವ ರಚಿಸಿ
ಬ್ರಹ್ಮ ತಿಗರಿಯನ್ನು ಬ್ರಹ್ಮಾಂಡಕಬ್ಬಿಸಿ
ಬ್ರಹ್ಮವರಿದುನಿತ್ಯ ಸುಮ್ಮನೆ ಇರುವಂಥ
ಮನವೆಂಬ ಮಣ್ಣಲ್ಲಿ ಚಿನುಮಯಜಲವಬೆರಸಿ
ಘನವಾಗಿನಾದಿ ಏನಿತೊ ಆಕಾರಗೊಳಿಸಿ
ಬಿನಗುತ್ರಿಗುಣದ ಗಡಿಗೆ ಅಗ್ನಿಯಲಿಟ್ಟು
ಘನಗುರುಮಲ್ಲಿನಾಥನ ಕೃಪಾಸನವೇರಿದಂಥ