ಭಾರತ ಸಂವಿಧಾನ ದಿನದಲ್ಲಿ ದೇಶಭಕ್ತ ರತ್ನಪ್ಪ ಕುಂಬಾರ ಅವರ ಒಂದು ನೆನಪು
ಭಾರತದ ಸಂವಿಧಾನವು ಇತರೆ ದೇಶಗಳಿಕ್ಕಿಂತ ವಿಶಿಷ್ಟವಾದ್ದು ಮತ್ತು ಇದಕ್ಕೆ ಒಂದು ಜೀವಂತಿಕೆ ಇದೆ. ಈ ಸಂವಿಧಾನವು ಕಾಲಕಾಲಕ್ಕೆ ತಕ್ಕಂತೆ ಪರಿಷ್ಕರಣೆಗೆ ಒಗ್ಗಿಕೊಂಡು ಅದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳತ್ತ ಬಂದಿದೆ. ಬದಲಾವಣೆಗೆ ತೆರೆದುಕೊಳ್ಳುತ್ತಲೇ ಇದೆ. ಇಂತಹ ಸಂವಿಧಾನ ರಚನಾ ಕಾರ್ಯವನ್ನು ಸ್ಮರಿಸುವ, ಗೌರವಿಸುವ, ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರತಿವರ್ಷ ನವಂಬರ 26ರಂದು ‘ಸಂವಿಧಾನ ದಿನ’ ಆಚರಿಸಲಾಗುತ್ತದೆ ಎಂದು ಘೊಷಿಸಿರುವುದರಲ್ಲಿ ಜೌಚಿತ್ಯವಿದೆ.
![]() |
PADMASHRI DR. RATNAPPA BHARAMMAPPA KUMBHAR |
![]() |
Welcome of Late Prime Minister ‘Bharat Ratna’ Shree Rajiv Gandhi by, Padmashri Dr. Deshbhakt Ratnappa Kumbhar |
![]() |
Receiving Highest Honour ‘Padma Shri’ at the hands of Late President of India Hon. Gyani Zail Singh. |
ರತ್ನಪ್ಪ ಬರಮಪ್ಪ ಕುಂಬಾರ 1909ರ ಸೆಪ್ಟೆಂಬರ್ 15 ರಂದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶೀರೊಲ್ ಹತ್ತಿರ ನೀಮಿಷೀರಗಾನ್ ಗ್ರಾಮದಲ್ಲಿ ಜನಿಸಿದರು, ಬಾಲ್ಯವನ್ನು ಮತ್ತು ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಮುಗಿಸಿ, ಕೊಲ್ಹಾಪುರದ ರಾಜಾರಾಮ್ ಕಾಲೇಜಿನಲ್ಲಿ ಇಂಗ್ಷೀಷ್‌ನಲ್ಲಿ ಬಿ.ಎ ಮುಗಿಸಿದ ನಂತರ ಕಾನೂನು ವಿಷಯದಲ್ಲಿ ಪದವಿಯನ್ನು ಪಡೆದುಕೊಂಡರು.
ರತ್ನಪ್ಪ ಕುಂಬಾರ ಅವರು ಯುವಕನಾಗಿದ್ದಾಗ ರಾಜಕೀಯ ಮತ್ತು ಸಾಮಾಜಿಕ ಕೆಲಸ ಬಗ್ಗೆ ತೀವ್ರ ಆಸಕ್ತಿ ಹೊಂದಿದ್ದರು ಅಲ್ಲದೆ ಸಕ್ರಿಯವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಬ್ರಿಟಿಷರ ವಿರುದ್ಧ ಹೊರಾಡಿ ಸುಮಾರು 6 ವರ್ಷಗಳ ಕಾಲ ಭೂಗತವಾಗಿದ್ದರು, ಪ್ರಜಾ - ಪರಿಷತ್ ಬ್ಯಾನರ್ ಅಡಿಯಲ್ಲಿ ಸಂಘಟನೆಯನ್ನು ಕಟ್ಟಿಕೊಂಡು ಸ್ಥಳೀಯ ಬ್ರಿಟಿಷ್ ಅಧಿಪಥ್ಯದ ರಾಜಾಡಳಿತದ ಮತ್ತು ರಾಜ ಸಂಸ್ಥಾನ ವಿರುದ್ಧ ರಾಜ ಸಂಸ್ಥಾನ ವಿಸರ್ಜನೆ ಮಾಡುವವರೆಗೂ ಚಳುವಳಿಯನ್ನು ಮಾಡಿದರು.
![]() |
Late Shri Madhukarrao Chaudhari, Speaker of Parliament standing with great phasing personality, Padmashri Dr. Deshbhakt Ratnappa Kumbhar. |
ಭಾರತ ಸ್ವಾತಂತ್ರ್ಯ ನಂತರ ರತ್ನಪ್ಪ ಕುಂಬಾರ ಅವರು ಭಾರತೀಯ ಸಂವಿಧಾನದ ಕರಡು ಸಮಿತಿಯಲ್ಲಿ ಸದಸ್ಯರಾಗಿ ಡಾ. ಬಿ. ಆರ್ .ಅಂಬೇಡ್ಕರ್ ಅವರೊಂದಿಗೆ ಸಕ್ರಿಯವಾಗಿ ಪಾಲ್ಗೊಂಡ ಸಂವಿಧಾನವನ್ನು ರಚಿಸುವುದಲ್ಲದೆ ಅಂತಿಮ ಕರಡು ಪ್ರತಿಗೆ ಅಂಬೇಡ್ಕರ ಅವರೊಂದಿಗೆ ತಮ್ಮ ಹಾಸ್ತಕ್ಷಾರವನ್ನು ಮೂಡಿಸಿದ್ದರು. ಮುಂದೆ 1952ರಲ್ಲಿಸಂಸತ್ ಸದಸ್ಯರಾಗಿ ಆಯ್ಕೆಯಾದರು, ನಂತರ 1962–1982 ಮತ್ತು 1990ರಲ್ಲಿ ಶೀರೊಲಿ ವಿಧಾನಸಭ ಕ್ಷೆತ್ರದ ವಿಧಾನಸಭ ಸದಸ್ಯರಾಗಿ ಆಯ್ಕೆಗೊಂಡಿದ್ದರು. 1974–1978ರ ಮಹಾರಾಷ್ಟ್ರ ಸರ್ಕಾರದ ವಸತಿ ಮತ್ತು ನಾಗರಿಕ ಸರಬರಾಜು ಖಾತೆಯ ಮಂತ್ರಿಯಾಗಿ ಸೇವೆ ಸಲ್ಲಿಸಿ ಅನೇಕ ಜನಪರ ಕೆಲಸಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮನ್ನಣೆಯನ್ನು ಗಳಿಸಿಗೊಂಡಿದ್ದರು. 1995 ರಲ್ಲಿ ಮಹಾರಾಷ್ಟ್ರ ರಾಜ್ಯ ವಿಧಾನ ಸಭೆಯ ಸ್ಪೀಕರ್ ಹುದ್ದೆಯನ್ನು ಅಲಂಕರಿಸಿದ್ದರು.
![]() |
Padmashri Dr. Deshbhakt Ratnappa Kumbhar in discussion with Late Chief Minister of Maharashtra Shri. Shankarao Chavan |
ರತ್ನಪ್ಪ ಕುಂಬಾರ ಕೊಲ್ಹಾಪುರದ ಶೀರೊಲ್ ಮತ್ತು ಹತ್ತನ್ನಾಂಗಳೆ ತೆಹಶೀಲ್‌ನ ಕೈಗಾರಿಕೆ ಮತ್ತು ವ್ಯವಸಾಯ ಕ್ಷೇತ್ರದಲ್ಲಿ ಸಮಗ್ರವಾದ ಅಭಿವೃದ್ಧಿಯನ್ನು ಮಾಡಿದ್ದರು ಮತ್ತು ಕೊಲ್ಹಾಪುರದಲ್ಲಿ ಸಹಕಾರ ಚಳವಳಿಯನ್ನು ಮಾಡುವುದರ ಮೂಲಕ ಸಹಕಾರ ಅಭಿವೃದ್ಧಿಯಲ್ಲಿ ಗಣಿನೀಯವಾದ ಬದಲಾವಣೆಯನ್ನು ತಂದು ಸಹಕಾರ ಅಭಿವೃದ್ಧಿಯ ಹರಿಕಾರ ಎಂದು ಜನರಿಂದ ಮನ್ನಣೆಯನ್ನು ಪಡೆದುಕೊಂಡಿದ್ದರು. ಈಚಲಕಾರಂಜಿ ಗಂಗಾನಗರ್‌ನಲ್ಲಿ ಪಂಚಗಂಗ ಸಹಕಾರಿ ಸಕ್ಕರೆ ಕಾರ್ಖಾನೆ ಅಭಿವೃದ್ಧಿ ಸಂಘ, ಪೀಪಲ್ಸ್ ಸಹಕಾರ ಬ್ಯಾಂಕ್ ಲಿಮಿಟೆಡ್, ಕೊಲ್ಹಾಪುರ ಜಿಲ್ಲಾ ಸಹಾಕಾರಿ ಗಿರಣಿ ಲಿಮಿಟೆಡ್, ಜನತಾ ಕೇಂದ್ರ ಸಹಕಾರ ಗ್ರಾಹಕ ಅಂಗಡಿಗಳು ಲಿಮಿಟೆಡ್ ಮುಂತಾದ ಅನೇಕ ಸಹಕಾರಿ ಸಂಘಗಳನ್ನ ಸ್ಥಾಪಿಸಿದ್ದರು. ಅಲ್ಲದೆ ಅನೇಕ ಶಾಲಾ, ಕಾಲೇಜ್‌ಗಳನ್ನು ಸಹಾ ಸ್ಥಾಪಿಸಿದರು.
![]() |
Marching with Late Chief Minister of Maharashtra Shri Yashwantrao Chavan. |
ತಂದೆ ಬರಮಪ್ಪ ಕುಂಬಾರ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ದೇಶ ಭಕ್ತಿ, ನಿಸ್ವಾರ್ಥ ಸೇವ ಮನೋಭಾವ, ಸಹಾನುಭೂತಿ ಮತ್ತು ಭಕ್ತಿಯ ಮನೋಭಾವನೆಯಿಂದ ಪ್ರೇರಣೆಕೊಂಡು ರತ್ನಪ್ಪ ಕುಂಬಾರ ಅವರೂ ಸಹ ಅನೇಕ ಜನಪರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರು ಇವರ ಸಾಮಾಜಿಕ ಮತ್ತು ರಾಜಕೀಯ ಕೊಡುಗೆಯನ್ನು ಮೆಚ್ಚಿ ಪುಣೆ ವಿಶ್ವವಿದ್ಯಾಲಯ D.Lit ಮದವಿಯನ್ನು ನೀಡಿ ಗೌರವಿಸಿದೆ. ಹಾಗೂ ಸ್ವತಂತ್ರ ಹೊರಾಟದಲ್ಲಿ ಸಂಕ್ರಿಯವಾಗಿ ಪಾಲ್ಗೊಂಡು ಸ್ವತಂತ್ರ
![]() |
Grand welcome with friendly gesture of Hon. Late President of India Shri. R. Venkatraman on the occasion of Silver Jubilee of College of Commerce, Kolhapur. |
![]() |
Our Founder President following the footsteps of Padma Bhushan Shri. Karmveer Bhaurao Patil, Founder Member of Rayat shikshan Sanstha |
ಕುಬೇರ ಕುಂಬಾರ
(ವಿವಿಧ ಮೂಲಗಳಿಂದ)
2 ಕಾಮೆಂಟ್‌ಗಳು:
ಅಪ್ರತಿಮ ಪ್ರತಿಭೆಯ ಅನಾವರಣ. ರಾಜಕೀಯ ಕ್ಷೇತ್ರದಲ್ಲಿ ಇವರು ಮೂಡಿಸಿರುವ ಹೆಜ್ಜೆ ಗುರುತು, ನಮ್ಮ ಜನಾಂಗಕ್ಕೆ ರಾಜಕೀಯವಾಗಿ ಭಧ್ರ ಬುನಾದಿಯನ್ನು ಹಾಕಿದಂತಾಗಿದೆ. ಅದರ ಮೇಲೆ ಒಂದು ಸೌಧ ನಿರ್ಮಿಸಬೇಕಾದ ಹೊಣೆಗಾರಿಕೆ ನಮ್ಮದೇ ಆಗಿದೆ. ಪಂಕಜ ಗೋಣಿಪುರ
Super
ಕಾಮೆಂಟ್ ಪೋಸ್ಟ್ ಮಾಡಿ